ಗೌರವಾದ್ಯಕ್ಷರ ಸಂದೇಶ

ಸಂದೇಶ
ಪರಶುರಾಮನ ಸೃಷ್ಟಿಯ ಈ ತುಳುನಾಡಿನಲ್ಲಿ ಅಸಂಖ್ಯಾತ ದೇವಸ್ಥಾನಗಳ ಜತೆಗೆ ಪ್ರಪಂಚದ ಬೇರೆ ಎಲ್ಲಿಯೂ ಕಂಡುಬರದ ದೈವಾರಾದನೆ, ನಾಗಾರಾದನೆ ತುಳುವರ ನಿತ್ಯ ಜೀವನದಲ್ಲಿ ಹಾಸುಹೋಕ್ಕಾಗಿದೆ. ಎಲ್ಲವನೂ ವ್ಯಾವಹಾರಿಕವಾಗಿ ನೋಡುವ ಪ್ರಸ್ತುತ ಸಂದಿಕಾಲದಲ್ಲಿ ನಮ್ಮ ಹಿರಿಯರು ನಂಬಿಕೊಂಡು ದೈವಶಕ್ತಿಗಳು ಮತ್ತು ಅವುಗಳ ಆರಾಧನೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ದಾರ್ಮಿಕ ಕಳಕಳಿ ನಮ್ಮದಾಗಿದೆ. ಅಲ್ಲಲ್ಲಿ ನಡೆಯುತ್ತಿರುವ ಇಂತಹ ಜೀಣೊಧ್ದಾರದ ಪ್ರಯತ್ನಗಳಂತೆ ನಾವು ಒಟ್ಲ ಶ್ರೀ ಧರ್ಮರಸು ಉಲ್ಲಾಕುಲು ಮತ್ತು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರವನ್ನು ಅಭಿವ್ರದ್ಧಿ ಮಾಡುತಿದ್ದೇವೆ.
ಸುಮಾರು 1,000 ವರ್ಷಗಳ ಹಿಂದಿನ ಇತಿಹಾಸವಿರುವ ದೈವ ಕ್ಷೇತ್ರವಿದು. ಸುಪ್ರಸಿದ್ದ ಪ್ರವಾಸಿ ಸ್ಥಳ ``ಮತ್ಷ ಕ್ಷೇತ್ರ ಶ್ರೀ ಶಿಶಿಲೇಶ್ವರ ದೇವಸ್ಥಾನ ಮತ್ತು ಅದರ ಜತೆಗೆ ಗಮನಾಗಮನ ಸಂಬಂದ ಹೊಂದಿರುತ್ತದೆ. ಈ ಕ್ಷೇತ್ರ ಬಿಲ್ಲವ ಜಾತಿಯ ತುಂಡರಸರ ಆಳ್ವಿಕೆಗೆ ಒಳಪಟ್ಟಿದ್ದು ಅದಕ್ಕೆ ಸಾಕ್ಷಿ ಎಂಬಂತೆ `` ಪಟ್ಟದ ಕತ್ತಿ’’, ಊರಿನ ನ್ಯಾಯ ತೀರ್ಮಾನ ಮಾಡುವ ``ಬಲ್ಲಾಕುಲ ಮಂಟಪ ’’ ಇದೆ. ಉಲ್ಲಾಕ್ಳು ದೈವದ ಮೂಲಸಾನಿಧ್ಯ,
ರಕ್ತೇಶ್ವರಿಯ ಧರ್ಮಚಾವಡಿ, ಗ್ರಾಮದೈವ ಶಿರಾಡಿ ರಾಜನ್ ದೈವಗಳು, ಪಟ್ಟದದೈವ ಪಂಜುರ್ಲಿ, ಪಿಲಿಕಲ್ತಾಯ(ಹುಲಿ ಚಾಮುಂಡಿ), ಕೊಡಮಣಿತ್ತಾಯ, ಬ್ರಹ್ಮರ ಗುಡಿ, ಪರಿವಾರ ದೈವ ಕಲ್ಲುಟ್ಟಿಯ ದಿವ್ಯ ಸಾನಿದ್ಯದೊಂದಿಗೆ ನಾಗಬ್ರಹ್ಮರ ನಾಗಬನ ಆರಾದನೆ ಪ್ರಕೃತಿಯ ಹಚ್ಚಹಸುರಿನ ಸೊಬಗು ಬಲು ರಮನೀಯವಾದದ್ದು.
ಸುಮಾರು  450 ವರ್ಷಗಳ ಹಿಂದೆ ಸಾಮಾಜಿಕ ಏಳಿಗೆ ಮತ್ತು ಸತ್ಯಧರ್ಮಗಳ ಉಳಿವಿಗಾಗಿ ಹೊರಾಡಿ ಜನಮಾನಸದಲ್ಲಿ ಅಮರರಾದ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರು ಇಲ್ಲಿಯೇ ಪ್ರಾಥಮಿಕ ಗರಡಿ ವಿಧ್ಯೆ ಕಲಿತರೆಂಬ ಪ್ರತೀತಿ ಮತ್ತು ಇದರ ಸವಿನೆನಪಿಗಾಗಿ ಬ್ರಹ್ಮ ಬೈದರ್ಕಳಾದ ನಂತರ ಗರೋಡಿಯಾಗಿ ಪರಿವರ್ತನೆಗೊಳಿಸಿದರೆಂಬ ವಿಷಯ ಸ್ಥಳದ ಅಷ್ಟಮಂಗಳ ಪ್ರಶ್ನೆಯಲ್ಲಿಯೂ ತಿಳಿದುಬಂದಿರುತ್ತದೆ. ಕಾಕತಾಳಿಯವೊ ಎಂಬಂತೆ ಇತ್ತೀಚೆಗೆ ಪಡುಮಲೆಯ ನಡೆದ ಅಷ್ಟಮಂಗಳದಲ್ಲಿಯೂ ಕಾರ್ಣಿಕ ಪುರುಷರ ವಿಷಯದಲ್ಲಿ ನಡೆದ ಚರ್ಚೆಯ ವೇಳೆ `ಪಾಂಗಳ ನಾಣಯರ ಗರಡಿ ವಿದ್ಯಾಬ್ಯಾಸಕ್ಕೆ ಹೋಗುವ ಮೊದಲೇ ಗರಡಿ ವಿದ್ಯೆಯನ್ನು ಪಡೆದಿದ್ದರೆಂಬ ವಾದವನ್ನು ಪುಷ್ಟಿಕರಿಸಿದೆ.
ಮೂಲಸಂಪರ್ಕ ಸೌಕರ್ಯ ಕೊರತೆ ಸುಮಾರು ವರ್ಷಗಳ ಜೀರ್ಣೋದ್ದಾರದ ಪ್ರಯತ್ನಗಳಿಗೆ ಅಡ್ಡಿಯಾಗಿದ್ದರೂ, ಊರವರ ಅವಿರತ ಶ್ರಮ, ಶ್ರಧ್ದೆ ಮೆಚ್ಚತಕ್ಕದ್ದು. ಇದರೊಂದಿಗೆ ನನ್ನ ಕಾರ್ಯಕಾಲದಲ್ಲಿ ಈ ಕ್ಷೇತ್ರದ ಜೀರ್ಣೋಧ್ದಾರದ ಪುಣ್ಯಕಾರ್ಯಕ್ಕೆ ಬ್ರಹ್ಮ ಬೈದರ್ಕಳರ ಪ್ರೇರಣೆ ಮತ್ತು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.
ಆಸ್ಥಿಕರಾದ ಎಲ್ಲಾ ಭಕ್ತರಲ್ಲಿ ಈ ಕ್ಷೇತ್ರದ ಹಿಂದಿನ ಪರಮವೈಭವದ ಸ್ವರೂಪ ಕೊಡುವ ಪ್ರಯತ್ನಗಳಿಗೆ ತನು,ಮನ, ಧನಗಳಿಂದ ಆಸರೆಯಾಗಿ ನಿಲ್ಲೋಣ ಮತ್ತು `` ಕಂಕನಾಡಿ ಬ್ರಹ್ಮ ಬೈದರ್ಕಳ’’ರ ಪೂರ್ಣ ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತೇನೆ.

ಕೆ. ಚಿತ್ತರಂಜನ್
ಧರ್ಮದರ್ಶಿಗಳು.

ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿ, ಮಂಗಳೂರು.